Karaavali News

 • ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತರಬೇಕು : ಶಾಸಕ ವೇದವ್ಯಾಸ ಕಾಮತ್

  ಮಂಗಳೂರು : ಮಂಗಳೂರು ಕೆನರಾ ಹೈಸ್ಕೂಲ್ (ಪ್ರಧಾನ) ನಲ್ಲಿ ವಿದ್ಯಾರ್ಥಿ ಸಂಘವನ್ನು ಶನಿವಾರ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು. ಶಾಲೆಯ ಪರವಾಗಿ ನೂತನ ಶಾಸಕರನ್ನು ಶಾಲು ಹೊದೆಸಿ ಫಲಪುಷ್ಪವನ್ನಿತ್ತು ಅಭಿನಂದಿಸಲಾಯಿತು. ನಂತರ ಮಾತನಾಡಿದ ಶಾಸಕರು, ತಾನು ಶಾಸಕನಾಗಿ ಆಯ್ಕೆಯಾದ ಮೇಲೆ ನೂರಾರು ಕಡೆ ಅಭಿನಂದನೆ ನಡೆದಿದೆ. ಆದರೆ ಇಂದಿನ ಈ ಅಭಿನಂದನೆಯ ಅನುಭವವೇ ಬೇರೆ. ತಾನು ಕಲಿತ ಶಾಲೆಯ ವೇದಿಕೆ ಮೇಲೆ ನನಗೆ ಕಲಿಸಿದ ಗುರುಗಳ ಕೈಯಲ್ಲಿ ಅಭಿನಂದನೆ ಪಡೆಯುವಾಗ ಮನಸ್ಸು ತುಂಬುತ್ತದೆ. […]

  July 21, 2018 7:13 PM IST
 • ಮಕ್ಕಳ ಸುರಕ್ಷತೆಗೆ ದಿಟ್ಟ ಕ್ರಮ; ಮಳೆಯ ನಡುವೆ ಪೊಲೀಸರಿಂದ ‘ಸ್ಕೂಲ್ ವೆಹಿಕಲ್’ ಕಾರ್ಯಾಚರಣೆ!

  ಕುಂದಾಪುರ: ಒಂದೆಡೆ ಬಿರುಸಿನಿಂದ ಮಳೆ ಸುರಿಯುತ್ತಿದ್ದರೇ ಇತ್ತ ಪೊಲೀಸರು ಮಳೆಯನ್ನು ಲೆಕ್ಕಿಸದೇ ಬೀದಿಗಿಳಿದಿದ್ದರು. ಶನಿವಾರ ಮಧ್ಯಾಹ್ನ ಬಿಡದೇ ಸುರಿಯುತ್ತಿದ್ದ ಮಳೆಯ ನಡುವೆ ಕುಂದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಶಾಲಾ ವಾಹನಗಳ ತಪಾಸಣೆ ಕಾರ್ಯ ನಡೆಸಿದರು. ಪ್ರತ್ಯೇಕ ಎರಡು ಕಡೆಗಳಲ್ಲಿ ಈ ಕಾರ್ಯಾಚರಣೆ ನಡೆಯಿತು. ಕುಂದಾಪುರದ ಪುರಸಭೆ ವ್ಯಾಪ್ತಿಯ ವೆಸ್ಟ್ ಬ್ಲಾಕ್ ರಸ್ತೆ ಹಾಗೂ ಬಸ್ರೂರು ಮೂರುಕೈ ಸಮೀಪ ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ಕುಂದಾಪುರ ಪೊಲೀಸರು ಎರಡು ಪ್ರತ್ಯೇಕ ತಂಡ ರಚಿಸಿಕೊಂಡು […]

  July 21, 2018 6:22 PM IST
 • ಹಲವು ಸಮಸ್ಯೆಗಳ ನಿವಾರಣೆಗೆ ಸರಳ ಪರಿಹಾರಗಳು…..!

  ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇರುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದಕ್ಕೆಲ್ಲ ಪರಿಹಾರ ನಮ್ಮಲ್ಲಿ ಇರುವುದು ಎಂಬುದು ಯಾರಿಗೂ ತಿಳಿದಿರುವುದಿಲ್ಲ.ಎಲ್ಲರೂ ವೈದರ ಬಳಿ ತಮ್ಮ ತಮ್ಮ ಸಮಸ್ಯೆಗಳ ಹಿಡಿದುಕೊಂಡು ಓಡುತ್ತಾರೆ.ಅದಕ್ಕಾಗಿಯೇ ಇಲ್ಲಿದೆ ಕೆಲವು ಸಮಸ್ಯೆ ನಿವಾರಣೆಗೆ ಕೆಲವು ಸರಳ ಪರಿಹಾರ….! ಬಿಕ್ಕಳಿಕೆ ಬರುವುದೇ : ಹುರುಳಿ ಕಷಾಯ ಸೇವಿಸಿರಿ. ಕಫ ಬರುವುದೇ : ಶುಂಠಿ ಕಷಾಯ ಸೇವಿಸಿರಿ. ಹೊಟ್ಟೆಯಲ್ಲಿ ಹರಳಾದರೇ : ಬಾಳೆದಿಂಡಿನ ಪಲ್ಯ ಸೇವಿಸಿರಿ. ಬಿಳಿ ಕೂದಲೇ : ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ. […]

  July 21, 2018 4:37 PM IST
 • ಮಂಗಳೂರು : ಪವಿತ್ರ ಹಜ್ ಯಾತ್ರೆಗೆ ಸಚಿವ ಝಮೀರ್ ಅಹ್ಮದ್ ಖಾನ್ ಚಾಲನೆ

  ಮಂಗಳೂರು, ಜುಲೈ.21: ಭಾರತೀಯ ಹಜ್ ಸಮಿತಿಯ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಪವಿತ್ರ ಹಜ್ ಯಾತ್ರೆಗೆ ಇಂದು ಚಾಲನೆ ದೊರೆಯಿತು. ಬಜ್ಪೆಯ ಅನ್ಸಾರ್ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಹಜ್ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಯಾತ್ರೆಗೆ ಚಾಲನೆ ನೀಡಿದರು. ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಮಂಗಳೂರು ಹಜ್ ನಿರ್ವಹಣಾ […]

  July 21, 2018 4:16 PM IST
 •  
  » More